ಹುಬ್ಬಳ್ಳಿ-ಧಾರವಾಡ ಪಶ್ಚಿಮ (74) ಕ್ಷೇತ್ರವು ನಗರ, ಗ್ರಾಮೀಣ ಹಾಗೂ ಅರೆಗ್ರಾಮೀಣ ಭಾಗದ 20 ವಾರ್ಡಗಳನ್ನು ಒಳಗೊಂಡಿದೆ. ಈ ಎಲ್ಲಾ 20 ವಾರ್ಡಗಳು ಹುಬ್ಬಳ್ಳಿ-ಧಾರವಾಡದ ಮಹಾನಗರ ಪಾಲಿಕೆಯ ಅಧೀನದಲ್ಲಿ ಬರುತ್ತವೆ. ಕರ್ನಾಟಕ ಜಲಮಂಡಳಿಯಿಂದ ನೀರು ಸರಬರಾಜು ಹಾಗೂ ಹುಬ್ಬಳ್ಳಿ ವಿಧ್ಯುತ್ ಸರಬರಾಜು ಕಂಪನಿಯಿಂದ ವಿಧ್ಯುತ್ ಪೂರೈಸಲಾಗುತ್ತಿದೆ. ಸದರ ಮತಕ್ಷೇತ್ರದಲ್ಲಿ ಉತ್ತಮ ರೀತಿಯ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಥ್ರ್ಯ ಹೊಂದಿದ ಯುವಜನರನ್ನು ತಯಾರು ಮಾಡುವದು ಮಾನ್ಯ ಶಾಸಕರ ಗುರಿಯಾಗಿದೆ. ವಿಶ್ವದಜರ್ೆಯ ಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವದು, ಉದ್ಯೋಗ ನೀಡಿಕೆಗೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆ ಮತ್ತು ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ.