ಹುಬ್ಬಳ್ಳಿ-ಧಾರವಾಡದಲ್ಲಿ ನಾವು ಐದು ಉತ್ಕೃಷ್ಟವಾದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಇವುಗಳಲ್ಲಿ ಈಗಾಗಲೇ ಶಿಕ್ಷಕರ ತರಬೇತಿ ಸಂಸ್ಥೆ, ಪೊಲೀಸ್ ತರಬೇತಿ ಸಂಸ್ಥೆ ಹಾಗೂ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ (IIIT).
ನಮ್ಮ ಶ್ರೀಮಂತ ಪರಂಪರೆಯನ್ನು ಕಾಪಾಡುವ ಮತ್ತು ಪ್ರದರ್ಶಿಸುವ ಉದ್ದೇಶದಿಂದ ಮತ್ತು ಕಲೆ, ಸಂಗೀತ, ನೃತ್ಯ ಮತ್ತು ರಂಗಭೂಮಿಗೆ ಉತ್ತೇಜನ ನೀಡಿ ಸ್ಥಳೀಯ ಹಾಗೂ ಮುಂಬರುವ ಪ್ರತಿಭೆಗಳಿಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಧಾರವಾಡದಲ್ಲಿ ಉತ್ತಮ ಗುಣಮಟ್ಟದ ಕಲಾ ಸಂಕೀರ್ಣ (ಕಲಾಮಂದಿರ) ವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
ನನ್ನ ಪ್ರಯತ್ನವು ಕಾರ್ಮಿಕರಿಗೆ ಶ್ರಮ ಆಧಾರಿತ ಉದ್ಯೋಗ ಕೊಡಿಸುವದಾಗಿದೆ. ಮತ್ತು ಉಧ್ಯಮಶೀಲತೆಯನ್ನು ಬೆಂಬಲಿಸಿ ನನ್ನ ಕ್ಷೇತ್ರದ ಜನರು ಉದ್ದಿಮೆದಾರರಾಗುವಂತೆ ಮಾಡುವದು ನನ್ನ ಗುರಿಗಳಲ್ಲೊಂದಾಗಿದೆ.
ಇಂದು ಪರಿಣಾಮಕಾರಿಯಾದ ಮತ್ತು ಸಮರ್ಥವಾದ ನಗರ ಯೋಜನೆಯ ಅಗತ್ಯವಿದೆ ಮತ್ತು ನಾನು ನನ್ನ ಕ್ಷೇತ್ರದ ಜನತೆಯೊಂದಿಗೆ ಸೇರಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿಯ ಕುರಿತು ಯೋಜನೆ ತಯಾರಿಸಿದ್ದೇನೆ. ಇದರ ಪ್ರಾರಂಭಿಕ ಹಂತವಾಗಿ ದೊರೆತಿರುವ ಸಮಯಾವಕಾಶದಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಮತ್ತು ಜನರ ಎಲ್ಲ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸುವಂತಹ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಆಧ್ಯತೆ ನೀಡಲಾಗಿದೆ.
ಕರ್ನಾಟಕದಲ್ಲಿ ಇಂದು ಕೇಂದ್ರೀಕೃತ ಔಷಧಿಯ ಖರೀದಿಯ ವ್ಯವಸ್ಥೆ ಆಗಬೇಕಾಗಿರುವ ಅಗತ್ಯತೆ ಇದೆ. ಇದರಿಂದ ಎಲ್ಲ ಜನರಿಗೂ ಜೀವನಾವಶ್ಯಕವಾದ ಔಷಧಿಗಳು ಕೈಗೆಟುಕುವ ದರದಲ್ಲಿ ದೊರೆಯುವಂತಾಗುತ್ತದೆ.
ಸ್ಥಳೀಯ ಕ್ರೀಡೆಗಳನ್ನು ಉತ್ತೇಜಿಸುವದು ಹಾಗೂ ಕ್ರೀಡಾ ಸ್ಪೂರ್ತಿಯನ್ನು ಉತ್ತೇಜಿಸುವ ಸಲುವಾಗಿ ಧಾರವಾಡದಲ್ಲಿ ಕ್ರೀಡಾ ಸಂಕೀರ್ಣವನ್ನು ಅತೀ ಶೀಡ್ರದಲ್ಲಿಯೇ ಆರಂಭಿಸಲಾಗುವದು.
ಹುಬ್ಬಳ್ಳಿ-ಧಾರವಾಡದಲ್ಲಿ ವನ್ಯಜೀವಿಗಳ ಉದ್ಯಾನವನನ್ನು ಆರಂಭಿಸುವದು ಅಗತ್ಯವಾಗಿದ್ದು. ಇದು ನಮ್ಮ ರಾಜ್ಯದ ಶ್ರೀಮಂತ ವನ್ಯಜೀವಿ ಸಂಪತ್ತಿನ ಅನಾವರಣಗೊಳಿಸಿದಂತಾಗುವದಲ್ಲದೆ ಅವಳಿ ನಗರದ ಪ್ರಮುಖ ಪ್ರವಾಸಿ ತಾಣವಾದಂತಾಗುತ್ತದೆ.
ನನ್ನ ಉದ್ದೇಶವು ಕೃಷಿಯನ್ನು ಲಾಭದಾಯಕ ವ್ಯಾಪಾರವನ್ನಾಗಿಸುವದಾಗಿದ್ದು, ಹುಬ್ಬಳ್ಳಿ-ಧಾರವಾಡದ ರೈತರು ಗೌರವಯುತ ಜೀವನ ನಡೆಸುವಂತೆ ಮಾಡುವದಾಗಿದೆ. ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಈಗಾಗಲೇ ಹಲವಾರು ಬಾಂದಾರ (ಚೆಕ್ ಡ್ಯಾಮ್) ಗಳನ್ನು ನಿರ್ಮಾಣ ಮಾಡಿರುವದರಿಂದ ವರ್ಷವಿಡಿ ರೈತರಿಗೆ ನೀರಾವರಿಗಾಗಿ ನೀರು ದೊರೆಯುವಂತಾಗಿದೆ.